Jan 27, 2010

ಆಸೆ:- ನನ್ನ ಹುಡುಗಿ..... ಹೀಗಿರಬೇಕು....

ನನ್ನ ಹುಡುಗಿ ಐಶ್ವರ್ಯಾಳಂತೆ ವಿಶ್ವಸುಂದರಿಯಾಗಿರಬೇಕೆಂದೇನಿಲ್ಲಾ;
ಆಕೆಯ ಆಂತರಿಕ ಸೌಂದರ್ಯ ನನಗಾಗಿ ತುಡಿಯುತ್ತಿದ್ದರೆ ನನಗದಷ್ಟೇ ಸಾಕು…

ನನ್ನ ಹುಡುಗಿ ಕೋಟ್ಯಾಧೀಶ್ವರನ ಒಬ್ಬಳೇ ಮಗಳಾಗಿರಬೇಕೆಂದೇನಿಲ್ಲಾ;
ನನ್ನ ಸಂತಸದ ಬಗ್ಗೆ ಆಕೆ ಸದಾ ಲಕ್ಷ್ಯ ಕೊಟ್ಟರೆ ನನಗದಷ್ಟೇ ಸಾಕು…

ನನ್ನ ಹುಡುಗಿ ಪಾಕ ಪ್ರವೀಣೆಯಾಗಿರಬೇಕೆಂದೇನಿಲ್ಲಾ;
ನನಗಾಗಿ ಸದಾ ಪ್ರೀತಿಯನ್ನುಣಬಡಿಸಿದರೆ ನನಗದಷ್ಟೇ ಸಾಕು…

ನನ್ನ ಹುಡುಗಿ ಸದಾ ನನ್ನ ಅಡಿಯಾಳಾಗಿ ಇರಬೇಕೆಂದೇನಿಲ್ಲಾ;
ಆಕೆ ಸದಾ ನನ್ನ 'ಕೇರ್ ಟೇಕರ್' ಆಗಿದ್ದರೆ ನನಗದಷ್ಟೇ ಸಾಕು...

ನನ್ನ ಹುಡುಗಿ ನಾ ವಿರಮಿಸುವಾಗ ಕಾಲೋತ್ತಿ ಸೇವೆ ಮಾಡಬೇಕೆಂದೇನಿಲ್ಲಾ;
ನಾನು ತಲೆನೋವೆಂದು ಮಲಗಿರುವಾಗ ಹಣೆ ನೇವರಿಸಿದರೆ ನನಗದಷ್ಟೇ ಸಾಕು…

ನನ್ನ ಹುಡುಗಿ ನನ್ನ ದಾರಿ ನೋಡುತ್ತಾ ದಿನಾ ನನಗಾಗಿ ಕಾಯಬೇಕೆಂದೇನಿಲ್ಲಾ;
ನಾನು ಸುಸ್ತಾಗಿ ಬಂದಾಗ ನಗುಮೊಗದಿಂದ ಬರಮಾಡಿಕೊಂಡರೆ ನನಗದಷ್ಟೇ ಸಾಕು...

ನನ್ನ ಹುಡುಗಿ ನಾ ಗದರಿಸಿದಾಗ ಗದರಿ ಕುಳಿತುಕೊಳ್ಳಬೇಕೆಂದೇನಿಲ್ಲಾ;
ನನ್ನ ಪ್ರೇಮಕೆ ಸದಾ ಪ್ರೀತಿಯ ಮಳೆಗರೆದರೆ ನನಗದಷ್ಟೇ ಸಾಕು…

ನನ್ನ ಹುಡುಗಿ 'ಮಾಸ್ಟರ್ಸ್ ಡಿಗ್ರಿ' ಕಲಿತಿರಬೇಕೆಂದೇನಿಲ್ಲಾ;
ಆಕೆ ನನ್ನೊಂದಿಗೆ ಸುಂದರ ಜೀವನ ನಡೆಸಲು ಕಲಿತಿದ್ದರೆ ನನಗದಷ್ಟೇ ಸಾಕು…

ನನ್ನ ಹುಡುಗಿ ಸೀತೆಯಂತೆ ಪತಿವ್ರತೆ ಆಗಿರಬೇಕೆಂದೇನಿಲ್ಲಾ;
ಆಕೆ ಸದಾ ನನ್ನನ್ನು ಪತಿದೇವರೆಂದು ಪರಿಗಣಿಸಿದರೆ ನನಗದಷ್ಟೇ ಸಾಕು…

ನನ್ನ ಹುಡುಗಿ ಲವ-ಕುಶರಂಥಾ ಅಸಾಮಾನ್ಯ ಮಕ್ಕಳಿಗೆ ಜನ್ಮ ನೀಡಬೇಕೆಂದೇನಿಲ್ಲಾ;
ಆಕೆ ನಮ್ಮ ಮಗುವನ್ನು ದೇಶದ ಉತ್ತಮ ಪ್ರಜೆಯಾಗಿ ನಿರ್ಮಿಸಿದರೆ ನನಗದಷ್ಟೇ ಸಾಕು…

*ರವೀ*

4 comments:

  1. ನಮಸ್ತೆ ರವಿ ,
    ಕವಿತೆ ಚೆನ್ನಾಗಿದೆ ,ನಿಮ್ಮ ಆಸೆ ಈಡೇರಲಿ
    --ಬೃಹಸ್ಪತಿ

    ReplyDelete
  2. Sakath agi baritira sir..super...i wish you should have "Geech" this before my marrige....VeRy VeRy NiCe Da


    Murali

    ReplyDelete
  3. very nice one it is.............I Like this!!!!!

    PRADEEP AKIREKKAD

    ReplyDelete
  4. ಬೃಹಸ್ಪತಿ, ಮುರಳಿ, ಪ್ರದೀಪ್, ನಿಮ್ಮ ನಲ್ಮೆಯ ಪ್ರತಿಕ್ರಿಯೆಗೆ ಧನ್ಯವಾದಗಳು...
    *ರವೀ*

    ReplyDelete