ಇನ್ನೊಬ್ಬರ ವಿಳಾಸ ಪುಸ್ತಕದಲ್ಲಿ ಜಾಗ ಪಡೆದುಕೊಳ್ಳುವುದು ಸುಲಭ
ಆದರೆ ಇನ್ನೊಬ್ಬರ ಹೃದಯದಲ್ಲಿ ಜಾಗ ಪಡೆದುಕೊಳ್ಳುವುದು ಕಷ್ಟ
ಇನ್ನೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುವುದು ಸುಲಭ
ಆದರೆ ನಮ್ಮ ತಪ್ಪುಗಳನ್ನು ನಿಭಾಯಿಸುವುದು ಕಷ್ಟ
ಯೋಚಿಸದೆ ಹಾಗೆ ಮಾತಾಡುವುದು ಸುಲಭ
ಆದರೆ ನಮ್ಮ ನಾಲಗೆಯನ್ನು ಹಿಡಿತದಲ್ಲಿಡುವುದು ಕಷ್ಟ
ನಮಗೆ ಪ್ರೀತಿ ಪಾತ್ರರಾದವರನ್ನು ನೋಯಿಸುವುದು ಸುಲಭ
ಆದರೆ ಆ ನೋವಿನ ಗಾಯವನ್ನು ಅಳಿಸುವುದು ಕಷ್ಟ
ಬೇರೆಯವರನ್ನು ಕ್ಷಮಿಸುವುದು ಸುಲಭ
ಆದರೆ ಇನ್ನೊಬ್ಬರಲ್ಲಿ ಕ್ಷಮೆ ಕೇಳುವುದು ಕಷ್ಟ
ಪ್ರತಿ ರಾತ್ರಿ ಸುಂದರ ಕನಸು ಕಾಣುವುದು ಸುಲಭ
ಆದರೆ ಕನಸನ್ನು ನನಸಾಗಿಸಲು ಹೋರಾಡುವುದು ಕಷ್ಟ
ಜಯವನ್ನು ಅನುಭವಿಸಿ ಬೀಗುವುದು ಸುಲಭ
ಆದರೆ ಆತ್ಮಸ್ಥೈರ್ಯದಿಂದ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟ
ಬೆಳದಿಂಗಳ ರಾತ್ರಿಯ ಸೊಬಗನ್ನು ಆಸ್ವಾದಿಸುವುದು ಸುಲಭ
ಆದರೆ ಅಮಾವಾಸ್ಯೆಯ ಕತ್ತಲಿಗೆ ಕ್ಷಣ ಕಳೆಯುವುದೂ ಕಷ್ಟ
ಇನ್ನೊಬ್ಬರಿಗೆ ಮಾತು ಕೊಡುವುದು ತುಂಬಾ ಸುಲಭ
ಆದರೆ ಕೊಟ್ಟ ಮಾತು ಉಳಿಸಿಕೊಳ್ಳುವುದು ತುಂಬಾ ಕಷ್ಟ
ಇನ್ನೊಬ್ಬರನ್ನು ಟೀಕಿಸುವುದು ಅತಿ ಸುಲಭ
ನಾವು ಟೀಕೆಗೊಳಗಾಗದಂತೆ ಬದುಕುವುದು ಕಷ್ಟ
ಒಳ್ಳೆಯದನ್ನು ಸ್ವೀಕರಿಸುವುದು ಸುಲಭ
ಆದರೆ ಒಳ್ಳೆಯದನ್ನು ಕೊಡುವುದು ಕಷ್ಟ
ಇದನ್ನೆಲ್ಲಾ ಓದುವುದು ಸುಲಭ
ಆದರೆ ಅನುಸರಿಸುವುದು ಕಷ್ಟ ಕಷ್ಟ!!
** (ಎಲ್ಲೋ ಓದಿದ್ದು ) - *ರವೀ*
No comments:
Post a Comment